ವಿಜಯ ಸಿಂಧೂರ ನರೇಗಲ್
ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನಲ್ಲಿ ಅಂತಿಮ ವರ್ಷದ ಬಿಸಿಎ ಪದವಿ ಕಲಿಯುತ್ತಿರುವ ಇಬ್ಬರು ವಿದ್ಯಾರ್ಥಿಗಳು ಪುಣೆ ಮೂಲದ ಕಂಪನಿಯಲ್ಲಿ ಇಂಜಿನೀರಿಂಗ್ ಹುದ್ದೆಗೆ ಆಯ್ಕೆಯಾಗಿದ್ದಾರೆ.


ಅನ್ನದಾನೇಶ್ವರ ಪದವಿ ಕಾಲೇಜಿನಲ್ಲಿ ಈಚೆಗೆ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಕೋಟೇಶ ಭೂಮೋಜಿ, ವಾಗೇಶ ವೀರಾಪುಠ ಎನ್ನುವ ವಿದ್ಯಾರ್ಥಿಗಳು ಸಿಎಸ್‌ವಿಎನ್ ಕಾರ್ಪೋರೇಟ್ ಕಂಪನಿಗೆ ₹3.75 ಲಕ್ಷದ ಪ್ಯಾಕೇಜಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲ ಎಸ್. ಎಲ್. ಗುಳೇದಗುಡ್ಡ ತಿಳಿಸಿದರು.
