ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಬಿಇಓ ನಾಣಿಕೀ ನಾಯ್ಕ ಅವರಿಗೆ ಬಿಳ್ಕೊಡಿಗೆ

ವಿಜಯ ಸಿಂಧೂರ ಶಿರಹಟ್ಟಿ

ಪಟ್ಟಣದ ಡಬಾಲಿ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ನಾಣಿಕೀ ನಾಯ್ಕ ಅವರಿಗೆ ಎರಡು ತಾಲೂಕಿನ ಶಿಕ್ಷಕ ವೃಂದದವರಿಂದ ಸವಿ ನೆನಪಿನೊಂದಿಗೆ ಮುಂದಿನ ಕನಸು ಗುರಿಯೆಡೆಗೆ ಪ್ರಯಾಣ ಎಂಬ ಶುಭ ಹಾರೈಕೆಗಳೊಂದಿಗೆ ಆತ್ಮೀಯವಾಗಿ ಬೀಳ್ಕೊಡುಗೆ ಸಮಾರಂಭ ಸಂಭ್ರಮದೊಂದಿಗೆ ನಡೆಯಿತು

ಸೇವಾ ನಿವೃತ್ತಿ ಹೊಂದಿದ ಶಿರಹಟ್ಟಿ ಲಕ್ಷ್ಮೇಶ್ವರ ತಾಲೂಕಿನ ಶಿಕ್ಷಣ ಕ್ಷೇತ್ರದ ಯಶಸ್ಸಿಗೆ ನಿರಂತರವಾಗಿ ಶ್ರಮವಹಿಸಿ ರಾಜ್ಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರಾದ ಕ್ಷೇತ್ರ ಶಿಕ್ಷಣಾಧಿಕಾರಿ ನಾಣಿಕೀ ನಾಯ್ಕ ಅವರನ್ನು ನೆಚ್ಚಿನ ಆತ್ಮೀಯ ಶಿಕ್ಷಕ ವೃಂದದವರು ಅದ್ದೂರಿಯಾಗಿ ವೇದಿಕೆಗೆ ಬರಮಾಡಿಕೊಂಡು ಸವಿ ನೆನಪನ್ನು ಆಲಿಸುತ್ತಾ ಹೂಮಾಲೆ ಶಾಲು ಹೊಂದಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ನಿಮ್ಮ ಮುಂದಿನ ಗುರಿಯೆಡೆಗೆ ಪಯಣ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು

ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಿಗೆ ತಮ್ಮೊಂದಿಗೆ ಶಿಕ್ಷಣ ಕಲಿತ ಗೆಳೆಯರ ಬಳಗದವರಿಗೆ ಶಿಕ್ಷಕ ವೃಂದದವರಿಗೆ ಆತ್ಮೀಯವಾಗಿ ಸನ್ಮಾನಿಸಿದರು

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!