ವಿಜಯ ಸಿಂಧೂರ,ನರಗುಂದ
ತಾಲೂಕಿನ ಚಿಕ್ಕನರಗುಂದ ಡಿ.ಎಸ್.ಕೆಂಚನಗೌಡ್ರ ಪ್ರೌಢಶಾಲೆಯ 2002- 2003 ನೇ ಸಾಲಿನ ಎಸ್ಎಸ್ಎಲ್ ಸಿ ವಿಧ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮವನ್ನು ನರಗುಂದ ಪುಣ್ಯಾರಣ್ಯ ಪತ್ರಿವನಮಠದ ಷ.ಬ್ರ.ಡಾ.ಶ್ರೀ ಗುರುಸಿದ್ಧವೀರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು.

ಗುರು ಎಂದರೇ ಬೆಳಕು ,ಜ್ಞಾನ ,ತೇಜಸ್ಸು , ಅದಕ್ಕೆ ಗುರುಗಳನ್ನು ಜ್ಞಾನಸೂರ್ಯ ಎಂದು ಕರೆಯುತ್ತಾರೆ.ಸೂರ್ಯ ಬಂದ ಕೂಡಲೆ ಕತ್ತಲೆ ಸಹಜವಾಗಿ ಕರಗುವಂತೆ ಗುರುವಿನ ಜ್ಞಾನದ ಅನುಗ್ರಹ ಆದ ಕೂಡಲೇ ಅಜ್ಞಾನ ತಾನಾಗಿಯೇ ನಿವಾರಣೆಯಾಗಿ ಸುಜ್ಞಾನ ಪಲಿಸುತ್ತದೆ.ಗುರಗುಳು ಜ್ಞಾನದ ಸಂಜೀವಿನಿ ನೀಡುವ ಶಕ್ತಿಯಾಗಿದ್ದಾರೆ ಎಂದು ಆಶೀರ್ವಚನ ನೀಡದರು.
ಎಲ್ಲರನ್ನು ಸಮಧೃಷ್ಟಿಯಿಂದ ನೋಡುತ್ತಾ ಜ್ಞಾನದ ಧಾರೆಯನ್ನು ಹರಿಸುವ ಗುರುಗಳನ್ನು ಗೌರವಿಸುವುದು ನಿಜಕ್ಕೂ ಒಂದು ಸತ್ಕಾರ್ಯವೇ ಸರಿ ಹಾಗೂ ಭವ್ಯ ಪರಂಪರೆ ನಮ್ಮದು.ಇದು ಶಿಷ್ಯರ ಗುರುಗಳ ಅಪೂರ್ವ ಸಂಗಮ ಇಲ್ಲಿ ಬಾಲ್ಯದ ನೆನಪುಗಳನ್ನು ಮೆಲಕು ಹಾಕುವ ಭವ್ಯ ಕಾರ್ಯಕ್ರಮ ಇದಾಗಿದೆ ಎಂದು ನರಗುಂದ ಕಾಲೇಜು ಉಪನ್ಯಾಸಕರಾದ ಶ್ರೀ ಎಸ್.ವ್ಹಿ. ದಂಡನಾಯ್ಕರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಂದನಾರ್ಹ ಗುರು ಬಳಗವನ್ನ ಪುಷ್ಪಾರ್ಚಣೆ ಮಾಡುವ ಮುಖಾಂತರ ವಿಧ್ಯಾರ್ಥಿಗಳು ಬರಮಾಡಿಕೊಂಡು ಸನ್ಮಾನ ಕಾರ್ಯಕ್ರಮ ಮಾಡಿದರು.ಶ್ರೀ ಎಚ್.ಏ.ಮುದಿಯಪ್ಪನವರ ಗುರುಗಳು ಮಾತನಾಡಿ 2002- 2003ನೇ ಸಾಲಿನ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳು ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಿಂದ ತುಂಬಾ ಸಂತೋಷವಾಗಿದೆ ನಾವು ನಿಜವಾಗಿಯೂ ಪುಣ್ಯವಂತರು ಏಕೆಂದರೆ ಇಲ್ಲಿ ಇದು 5ನೇ ಗುರುವಂದನಾ ಕಾರ್ಯಕ್ರಮ. ಒಬ್ಬ ಗುರುವಿಗೆ ಇದಕ್ಕಿಂತಲೂ ಬೇರೆ ಸಂತೋಷ ಏನಿದೆ.ಅದಕ್ಕೆ ತಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. 23ವರುಷಗಳ ನಂತರ ಎಲ್ಲರನ್ನೂ ನೋಡಿ ಸಂತೋಷವಾಗಿದೆ ಕವಿ ಹೇಳುವ ಹಾಗೆ” ಸ್ವರ್ಗದೊಳಗೆ ಈ ಸ್ನೇಹ ದೊರೆಯುವದೇನು? ಇಲ್ಲವಾಗಿರೆ ನಮಗೆ ಇಲ್ಲೇ ನೂರು ವರುಷಗಳಿರಲಿ.ಅದರಂತೆ ಮನೆಯೇ ಮೊದಲ ಪಾಠಶಾಲೆ ಜನನಿ ತಾ ಮೊದಲ ಗುರು .ಆದ ಕಾರಣ ತಮ್ಮ ಮಕ್ಕಳನ್ನು ಮೊಬೈಲ್ ಹಾಗೂ ಟಿವಿಯಿಂದ ದೂರ ಇಡಿ. ವಿದ್ಯೆಯ ಜೊತೆಗೆ ಒಳ್ಳೆಯ ಸಂಸ್ಕಾರ ಕೊಡಿ.ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಂಡು ಬಂಧು ಬಳಗದೊಂದಿಗೆ ಚೆನ್ನಾಗಿರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಎಸ್.ಎಸ್.ಕಂದಗಲ್ಲ ರವರು ವಿದ್ಯಾರ್ಥಿಗಳಿಗೆ ಗುರುವಿನ ಗುಲಾಮನಾಗುವ ತನಕ ದೊರೆಯುವುದನ್ನು ಮುಕುತಿ ಎಂಬ ನಾನುಡಿಯಂತೆ. ಜಗತ್ತಿನಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಜೀವನ ರೂಪಿಸಿಕೊಳ್ಳುವಂತ ಶಿಕ್ಷಣವನ್ನು ಕೊಟ್ಟವರು ಗುರುಗಳು. ಪ್ರತಿಯೊಬ್ಬ ಶಿಕ್ಷಕರು ವಿದ್ಯಾರ್ಥಿಗಳ ಈ ಒಂದು ಸಮಾರಂಭವನ್ನು ಕಂಡು ನಾವು ಕಲಿಸಿದ ಒಳ್ಳೆಯ ನೈತಿಕ ಸಂಸ್ಕಾರ ನಡೆ-ನುಡಿಯೇ ಇವತ್ತಿನ ಈ ಕಾರ್ಯಕ್ರಮ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರೇಣುಕಾ ಹೂಲಿ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು.ಶಾಲೆಯಲ್ಲಿ ತಾವು ಪಡೆದ ಅನುಭವಗಳ ಬಗ್ಗೆ ಅನಿಸಿಕೆಗಳನ್ನ ವಿದ್ಯಾರ್ಥಿಗಳಾದ ಮಹಾಂತೇಶ ಹಲಗೌಡ್ರ. ನಿರ್ಮಾಲಾ ಹನಸಿ.ಗೀತಾ ಕಂಬಳಿ.ರವಿ ತಳವಾರ.ಹನಮಂತ ಮೇಟಿ ಇವರು ವ್ಯಕ್ತಪಡಿಸಿದರು.ಮುತ್ತು ರಾಯರಡ್ಡಿ ಅವರು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು.ಪ್ರಕಾಶ ಗುಡಸಲಮನಿ ನಿರೂಪಣೆ ಮಾಡಿದರು. ಶ್ರೀಕಾಂತ ಚಲವಾದಿ ವಂದಿಸಿದರು.ಈ ಸಭೆಯಲ್ಲಿ ಎಲ್ಲಾ ಹಳೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಕುಟುಂಬ ಸಮೇತವಾಗಿ ಬಂದು ಸಭೆಗೆ ಶೋಭೆಯನ್ನು ತಂದರು.
