ವಿಜಯ ಸಿಂಧೂರ ತಾಳಿಕೋಟೆ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಇಲಾಖೆಯಲ್ಲಿ ಸುಮಾರು 44 ವರ್ಷಗಳ ಕಾಲ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಬೆರಳಚ್ಚುಗಾರ ರವಿ ರಾಠೋಡ ಅವರು ವಯೋನಿವೃತ್ತಿ ಹೊಂದಿದ ಹಿನ್ನೆಲೆ ಅವರಿಗೆ ಹೃದಯಂಗಮ ಬೀಳ್ಕೊಡುಗೆ ನೀಡಲಾಯಿತು.

ಪಟ್ಟಣದ ಎಪಿಎಂಸಿ ಕಾರ್ಯಾಲಯದ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಆರ್.ಎಸ್. ರಾಠೋಡ ಮಾತನಾಡಿ, “ರವಿ ರಾಠೋಡ ಅವರ ಪರಿಶ್ರಮ ಮತ್ತು ನಿಷ್ಠೆ ಇಲಾಖೆಗೆ ಮಾದರಿಯಾಗಿದೆ. ದಿನಗೂಲಿ ನೌಕರರಾಗಿ ಪ್ರಾರಂಭಿಸಿ ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ. ಅವರ ನಿವೃತ್ತ ಜೀವನ ಆರೋಗ್ಯ, ಸಂತೋಷ ಮತ್ತು ನೆಮ್ಮದಿಯಿಂದ ಸಾಗಲಿ” ಎಂದು ಹಾರೈಸಿದರು.

ಸಹಾಯಕ ಕಾರ್ಯದರ್ಶಿ ಮೌನೇಶ ಸೇರಿದಂತೆ ಅಡತ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ ಶೆಟ್ಟಿ, ಮಾಜಿ ಅಧ್ಯಕ್ಷ ಮಲ್ಲನಗೌಡ ಯಾದಗಿರಿ ಹಾಗೂ ಸಿ.ಎಸ್. ಯಾಳಗಿ, ಎಂ.ಬಿ. ಕುಂಬಾರ, ಏ.ಐ. ಜಾಲವಾದಿ, ಪ್ರಭು ಬಿಳೆಭಾವಿ, ಡಿ.ಕೆ. ಪಾಟೀಲ, ಎಸ್.ಡಿ. ಬಿದರಗುಂದಿ, ಎಸ್.ಸಿ. ಇಜೇರಿ, ಅಶೋಕ್ ಚಿನಗುಡಿ, ಸಲೀಂ ಕಲಾಸಿ, ಗುಂಡಣ್ಣ ಹಂದಿಗನೂರ, ಡಿಸಲೆ, ಮಾರುಕಟ್ಟೆ ಸಹಾಯಕ ಎಸ್.ಆರ್. ಮಠ ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
