ವಿಜಯ ಸಿಂಧೂರ ತಾಳಿಕೋಟೆ
ರಾಜ್ಯ ಸರಕಾರ ಜನಪರ ಆಡಳಿತಕ್ಕೆ ಹೆಸರಾಗಿದೆ.ಅದರಂತೆ ತಾಲೂಕಿನ ಜನರ ನೂರಾರು ಕಾರ್ಯಗಳಿಗೆ ಒಂದೇ ಸ್ಥಳದಲ್ಲಿ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರಜಾ ಸೌಧ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಒಳ್ಳೆಯ ವಿಚಾರ ಆದರೆ ಸರಕಾರದ ಭಾಗವಾಗಿರುವ ಈ ಕ್ಷೇತ್ರದ ಜನಪ್ರತಿನಿಧಿಗಳು ಸರಕಾರ ಮತ್ತು ಸಾರ್ವಜನಿಕರ ದಿಕ್ಕು ತಪ್ಪಿಸುವ ಪ್ರಯತ್ನವನ್ನು ಯಾರದೋ ಒಬ್ಬರ ಹಿತಾಸಕ್ತಿ ಮಾಡಲು ಹೊರಟಿರುವುದು ದುರಂತ ಬ.ನಾಲವಾಡ ಗ್ರಾಮದ ಯುವ ಮುಖಂಡ ರವೀಂದ್ರ ಮುಂದಿನಮನಿ ಆಕ್ರೋಶ ವ್ಯಕ್ತಪಡಿಸಿದರು

ಅವರು ಸೋಮವಾರ ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ಪ್ರಜಾ ಸೌಧ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು
ಸಾರ್ವಜನಿಕರ ತೆರಿಗೆ ಹಣ ಹಾಗೂ ಸರ್ಕಾರದ ಅನುದಾನದಲ್ಲಿ ನಿರ್ಮಾಣ ಮಾಡಲು ಹೊರಟಿರುವ ಪ್ರಜಾ ಸೌಧ ಕಟ್ಟಡ ಜನರ ಕಷ್ಟ,ಸುಖಗಳಿಗೆ ತಕ್ಷಣ ಕೈಗೆಟಕುವ ಸ್ಥಳದಲ್ಲಿ ನಿರ್ಮಾಣ ಮಾಡುವುದು ಬಿಟ್ಟು ಜನಪ್ರತಿನಿಧಿಗಳು ತಮ್ಮ ಹಾಗೂ ಹಿಂಬಾಲಕರ ಸ್ವಾರ್ಥಕ್ಕಾಗಿ ನಿರ್ಜನ ಪ್ರದೇಶದಲ್ಲಿ ಅದು ಪಟ್ಟಣದಿಂದ 4 ಕಿ.ಮೀ ದೂರದ ಮೈಲೇಶ್ವರ ಗ್ರಾಮದ ಹತ್ತಿರ ನಿರ್ಮಾಣ ಮಾಡಲು ಹೊರಟಿರುವ ಉದ್ದೇಶ ಏನಿದೆ? ಕಳೇದ 53 ದಿನಗಳಿಂದ ಇಲ್ಲಿನ ಜನ ಪಕ್ಷ,ಜಾತಿ, ಜನಾಂಗ ಭೇದವಿಲ್ಲದೆ ಹೋರಾಟ ಮಾಡುತ್ತಿದ್ದರೂ ಇಲ್ಲಿನ ಜನಪ್ರತಿನಿಧಿಗಳು ಜಾಣ ಮೌನ ವಹಿಸುವುದು ಮತ ನೀಡಿದವರು ತಪ್ಪು ಮಾಡಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು
ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಜನರ ನಿರಂತರ ಹೋರಾಟ ನೋಡಿಯೂ ಜನಪರ ನಿರ್ಣಯ ತೆಗೆದುಕೊಳ್ಳುವ ಬದಲು ನಿರ್ಜನ ಪ್ರದೇಶದಲ್ಲಿ ಸೌಧ ನಿರ್ಮಾಣಕ್ಕೆ ಮುಂದಾಗಿರುವುದು ಯಾರ ಲಾಭಕ್ಕಾಗಿ, ಒಬ್ಬರ ಹಿತಕ್ಕಾಗಿ ಲಕ್ಷಾಂತರ ಜನರ ಹಿತ ಬಲಿಕೊಡುವ ಈ ಹಠ ಯಾವ ಉದ್ದೇಶಕ್ಕಾಗಿ ಜನಪ್ರತಿನಿಧಿಗಳಿಗೆ ಇನ್ನೂ ಕಾಲ ಮಿಂಚಿಲ್ಲ ತಕ್ಷಣ ಎಚ್ಚೆತ್ತುಕೊಂಡು ಸ್ಥಳ ಬದಲಾವಣೆ ಮಾಡಿ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಹಠಮಾರಿ ಧೊರಣೆಗೆ ಮುಂದಾದರೆ,ಜನರೂ ಸಹ ಉಗ್ರ ಪ್ರತಿಭಟನೆ ಹಾದಿ ತುಳಿಯುವ ಕಾಲ ದೂರವಿಲ್ಲ ಮುಂದಿನ ಅವಘಡಗಳಿಗೆ ಈ ಭಾಗದ ಜನಪ್ರತಿನಿಧಿಗಳು ನೇರ ಹೊಣೆ ಆಗಬೇಕಾಗುತ್ತದೆ ಎಂದರು
ಪಟ್ಟಣದ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗಗಳು ಲಭ್ಯವಿದ್ದರೂ ಸಾರ್ವಜನಿಕರನ್ನು ಊರಾಚೆಯ ನಿರ್ಜನ ಪ್ರದೇಶಕ್ಕೆ ಅಲೆದಾಡಿಸುವ ಅನಿವಾರ್ಯತೆ ಏನಿದೆ ಈ ಕ್ರಮದಿಂದ ಹಿಂದೆ ಸುರಿಯಬೇಕು ಎಂದು ಒತ್ತಾಯಿಸಿದ್ದಾರೆ
ಮಹಾಂತೇಶ ಮುರಾಳ ಮಾತನಾಡಿ, “ಅಲ್ಲಿ ಹೋಗಲು ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲ, ಸುರಕ್ಷತೆಯೂ ಇಲ್ಲ. ವೃದ್ಧರು, ಮಹಿಳೆಯರು ಮತ್ತು ಅಂಗವಿಕಲರು ಕಿಲೋಮೀಟರ್‌ಗಟ್ಟಲೆ ದೂರದ ಕಾಡು ದಾರಿಯಲ್ಲಿ ಓಡಾಡಲು ಸಾಧ್ಯವೇ ಇದು ಅಧಿಕಾರಿಗಳ ಮತ್ತು ಶಾಸಕರ ಹಠಮಾರಿತನಕ್ಕೆ ಸಾಕ್ಷಿ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಮೀನು ದಾನದ ಹಿಂದೆ ಅಡಗಿದೆಯೇ ಭೂ-ಮಾಫಿಯಾ
ಸೌಧದ ನಿರ್ಮಾಣಕ್ಕಾಗಿ ಜಾಗ ದಾನ ನೀಡಿದವರ ನಡೆಯ ಬಗ್ಗೆಯೂ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. “ದಾನ ನೀಡಿರುವುದು ದೊಡ್ಡ ಉದಾರತೆಯಲ್ಲ, ಬದಲಾಗಿ ತಮ್ಮ ಸುತ್ತಮುತ್ತಲಿನ ಭೂಮಿಯನ್ನು ವಾಣಿಜ್ಯೀಕರಣಗೊಳಿಸಿ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಳ್ಳುವ ಹುನ್ನಾರವಿದು. ಸಾರ್ವಜನಿಕ ಹಿತಾಸಕ್ತಿಯ ಬದಲಾಗಿ ಇಲ್ಲಿ ವೈಯಕ್ತಿಕ ಲಾಭಕ್ಕೆ ಮಣೆ ಹಾಕಲಾಗುತ್ತಿದೆ,” ಎಂಬುದು ಪ್ರತಿಭಟನಾಕಾರರ ನೇರ ಆರೋಪ.
ಸಚಿವರ ಮೌನ ಸಮ್ಮತಿಯೇ ಅಥವಾ ಅಸಹಾಯಕತೆಯೇ
ಜಿಲ್ಲಾ ಉಸ್ತುವಾರಿ ಸಚಿವರ ನಡೆಯನ್ನು ತೀವ್ರವಾಗಿ ಖಂಡಿಸಿದ ಮುಖಂಡರು, “ಸಚಿವರು ಜಿಲ್ಲೆಯ ಜನರ ದನಿಯಾಗಬೇಕಿತ್ತು. 52 ದಿನಗಳಿಂದ ಜನರು ಬೀದಿಯಲ್ಲಿ ಕುಳಿತಿದ್ದರೂ ಸಚಿವರ ಮೌನ ಮುರಿಯದಿರುವುದು ಅವರ ಬೇಜವಾಬ್ದಾರಿತನವನ್ನು ತೋರಿಸುತ್ತದೆ,” ಎಂದು ಕಿಡಿಕಾರಿದರು.
ಈ ಸಂಧರ್ಭದಲ್ಲಿ ಬ. ಸಾಲವಾಡಗಿ ಗ್ರಾಮದ ಹಿರಿಯರಾದ ಚನ್ನಪ್ಪ ಗೌಡ ಬಿರಾದಾರ, ಮಲ್ಲಿಕಾರ್ಜುನ ಅನಂತರೆಡ್ಡಿ, ಮಧು ಹೊಳೆತ್ತಿ, ಮಲ್ಲನಗೌಡ ಮುಂದಿನಮನೆ, ಮಧು ಗೌಡ ವಟಾರ್, ಸಂಗನಗೌಡ ಪಾಟೀಲ, ಹನುಮಂತರಾಯ ಮುಂದಿನಮನಿ. ಇನ್ನು ಅನೇಕರು ಹಾಜರಿದ್ದರು.
ಹೋರಾಟ ಸಮಿತಿಯ ಎಲ್ಲ ಪದಾಧಿಕಾರಿಗಳು ಹಾಗೂ ಪಟ್ಟಣದ ಗಣ್ಯರು ಭಾಗವಹಿಸಿದ್ದರು.
