ಕೆಇಬಿ ನೌಕರ ಸಾವು, ಶಾಸಕ ಬೇಟಿ ಸಾಂತ್ವನ

ವಿಜಯ ಸಿಂಧೂರ ಸಿಂಧಗಿ

ಇತ್ತಿಚಿಗೆ ಸಿಂದಗಿ ಕೆಇಬಿ ಇಲಾಖೆಯ ಮಹಡಿಯ ಮೇಲಿಂದ ಆಯಾ ತಪ್ಪಿ ಬಿದ್ದು ಸಾವನ್ನಪ್ಪಿದ ಸಿಂದಗಿ ಕೆಇಬಿ ನೌಕರ ಮುತ್ತಪ್ಪ ಡಾಂಗೆ ಅವರ ಸಾವು ನಿಜಕ್ಕೂ ನಮಗೇಲ್ಲ ನೋವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.


ಅವರು ಮೃತ ವ್ಯಕ್ತಿಯ ಸ್ವಗ್ರಾಮ ತಾಲೂಕಿನ ಹಂದಿಗನೂರ ಗ್ರಾಮದ ಅವರ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.


ಈ ವೇಳೆ ಶಾಸಕ ಮನಗೂಳಿ ಮಾತನಾಡಿ, ಕುಟುಂಬಸ್ಥರು ಆತಂಕ ಪಡುವುದು ಬೇಡ ನಿಮ್ಮ ಜೊತೆ ನಾನು ಇದ್ದೇನೆ ಮೃತ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದರು. ಕೂಡಲೇ ಸಂಭಂದಿಸಿದ ಸಚಿವರಿಗೆ ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿ ಆದಷ್ಟು ಬೇಗ ಸಹಾಯ ಸಹಕಾರ ನೀಡಲು ಮನವಿ ಮಾಡುತ್ತೇನೆ ಎಂದರು.


ಈ ಸಮಯದಲ್ಲಿ ಮೃತನ ಹೆಂಡತಿ ಮುತ್ತಮ್ಮ ಡಾಂಗೆ ಅವರ 2 ಮಕ್ಕಳು, ತಂದೆ ಹಣಮಂತ ಡಾಂಗೆ, ತಾಯಿ ರೇಣುಕಾ ಡಾಂಗೆ, ಮುಖಂಡರಾದ ಶಿವಾನಂದ ವಾಲಿ, ಸಿದ್ದನಗೌಡ ಬಿರಾದಾರ, ಅರವಿಂದ ದೇಸಾಯಿ, ಸಲೀಮ್ ಕಣ್ಣಿ, ಶ್ರೀನಾಥ ಬಿರಾದಾರ, ಮಡು ರೋಡಗಿ, ಸೋಮನಗೌಡ ಬಿರಾದಾರ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!