ನರೇಗಲ್: ಬಹಳಷ್ಟು ಸಾಮಾಜಿಕ ಸಮಸ್ಯೆಗಳನ್ನು ಎದುರಿಸಿ ಸಾಮಾಜಿಕ ಸಾಮರಸ್ಯ ಹಾಗೂ ಸಮಾಜ ಸುಧಾರಣೆಗಾಗಿ ಹೋರಾಡಿದ ಮಹಾನ್ ದಾರ್ಶನಿಕರಾಗಿದ್ದಾರೆ. ಸಮಾಜದಲ್ಲಿನ ಅನಿಷ್ಠ ಜಾತಿ ಪದ್ಧತಿಯನ್ನು ತಮ್ಮ ಚಿಕ್ಕವಯಸ್ಸಿನಲ್ಲೇ ಕಂಡ ಡಾ. ಅಂಬೇಡ್ಕರ ಅವರು ಜಾತಿ ಪದ್ಧತಿ ಸಂಪೂರ್ಣ ನಿರ್ಮೂಲನೆ ಮಾಡಲು ಸಾಕಷ್ಟು ಹೋರಾಟಗಳನ್ನು ಕೈಗೊಂಡರು ಎಂದು ಅಂಗನವಾಡಿ ಕಾರ್ಯಕರ್ತೆ ಅನಿತಾ ವೀ. ಚಳ್ಳಮರದ ಹೇಳಿದರು

.ನರೇಗಲ್ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿರುವ 130ನೇ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಆಚರಣೆ ಮಾಡಲಾದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತೋತ್ಸವದಲ್ಲಿ ಮಾತನಾಡಿದರು. ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದ ಅಂಬೇಡ್ಕರ್ ಅಧ್ಯಯನ ಶೀಲತೆ ಅಪಾರವಾದುದ್ದು. ತಮ್ಮ ಶಿಕ್ಷ ಣ ಪಾಂಡಿತ್ಯದಿಂದ ಭಾರತಕ್ಕೆ ಸಂವಿಧಾನವನ್ನು ರಚಿಸಿದ ಮಹಾನ್ ವ್ಯಕ್ತಿಯಾದರು. ನಮ್ಮ ಸಂವಿಧಾನವು ಲಿಖಿತ ಸಂವಿಧಾನವಾಗಿದ್ದು, ಇದನ್ನು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅತ್ಯಂತ ಮುತುವರ್ಜಿಯಿಂದ ರಚನೆ ಮಾಡಿದ್ದಾರೆ. ನಾವು ಅವರೆಲ್ಲರಿಗೂ ಚಿರಋಣಿಯಾಗಿರಬೇಕು ಎಂದರು. ಅಸ್ಪೃಶ್ಯತೆ, ಅಸಮಾನತೆ ತೊಡೆದುಹಾಕಲು ಹೋರಾಡಿದ ಡಾ.ಬಿ.ಆರ್. ಅಂಬೇಡ್ಕರ್ ಸಾಕಷ್ಟು ಹೋರಾಟಗಳನ್ನು ಮಾಡುವ ಮೂಲಕ ಸಮಾಜ ಸುಧಾರಣೆಗೆ ಪಣತೊಟ್ಟಿದ್ದರು ಎಂದರು.
ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರಾದ ಅಲ್ಲಮ್ಮಾ ನಧಾಪ್, ಸಹಾಯಕಿ ಹುಸೇನ್‌ಬಿ ನೇಶಖಾನ, ಶಶಿಕಲಾ ಗದಗಿನಮನಿ, ಮಕ್ಕಳು ಇದ್ದರು.–ನರೇಗಲ್ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿರುವ 130ನೇ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಆಚರಣೆ ಮಾಡಲಾಯಿತು
