ವಿಜಯ ಸಿಂಧೂರ ತಾಳಿಕೋಟೆ
ಪ್ರಜಾಸೌಧ’ ನಿರ್ಮಿಸಲು ಹೊರಟಿರುವ ಸರ್ಕಾರದ ಹಠಮಾರಿತನದ ವಿರುದ್ಧ ಸಾರ್ವಜನಿಕ ಆಕ್ರೋಶ ಸ್ಫೋಟಗೊಂಡಿದೆ. ಬುಧವಾರದ ವೇಳೆಗೆ ಧರಣಿ ಸತ್ಯಾಗ್ರಹವು ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ, 51ನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟದ ಕಿಚ್ಚು ತಾಲೂಕಿನಾದ್ಯಂತ ಹಬ್ಬುತ್ತಿದಜೀವ ಪಣಕ್ಕಿಟ್ಟು ಹೋರಾಡುತ್ತಿರುವ ಜನ: ಜಿಲ್ಲಾ ಉಸ್ತುವಾರಿ ಸಚಿವರ ನಡೆಗೆ ಆಕ್ರೋಶ

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಳೆ, ಗಾಳಿ, ಬಿಸಿಲೆನ್ನದೆ ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರು ಜಿಲ್ಲಾ ಉಸ್ತುವಾರಿ ಸಚಿವರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “50 ದಿನಗಳಿಂದ ಜನ ರಸ್ತೆಯಲ್ಲಿ ಕುಳಿತಿದ್ದರೂ ಸಚಿವರು ಕಣ್ಣು ಮುಚ್ಚಿ ಕುಳಿತಿರುವುದು ಪ್ರಜಾಪ್ರಭುತ್ವಕ್ಕೆ ವಿರೋಧಿಯಾದ ನಡೆ. ಸಚಿವರು ಇಡೀ ಜಿಲ್ಲೆಗೆ ಜವಾಬ್ದಾರರೇ ಹೊರತು ಕೇವಲ ಒಂದೆರಡು ಕ್ಷೇತ್ರಗಳಿಗಲ್ಲ” ಎಂದು ಪ್ರತಿಭಟನಾಕಾರರು ಗುಡುಗಿದ್ದಾರೆ.
ಹೀರೂರ-ಚೋಕ್ಕಾವಿ ಗ್ರಾಮಸ್ಥರ ಸಂಪೂರ್ಣ ಬೆಂಬಲ
ಬುಧವಾರ ನಡೆದ ಪ್ರತಿಭಟನೆಯಲ್ಲಿ ಹೀರೂರ ಹಾಗೂ ಚೋಕ್ಕಾವಿ ಗ್ರಾಮದ ನೂರಾರು ಗ್ರಾಮಸ್ಥರು ಭಾಗವಹಿಸಿ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದರು. ಈ ವೇಳೆ ಮಾತನಾಡಿದ ಯುವ ಮುಖಂಡ ಸಂಗಮೇಶ ಕೊಪ್ಪದ, “ನಿರ್ಜನ ಪ್ರದೇಶದಲ್ಲಿ ಸೌಧ ನಿರ್ಮಿಸುವ ನಿರ್ಧಾರದ ಹಿಂದೆ ಭೂ-ಮಾಫಿಯಾದ ಕೈವಾಡವಿದೆ. ದಾನ ನೀಡಿದವರ ಸ್ವಹಿತಾಸಕ್ತಿಗಾಗಿ ಸಾವಿರಾರು ಜನರ ಅನುಕೂಲವನ್ನು ಬಲಿ ಕೊಡಲಾಗುತ್ತಿದೆ. ಇದು ಕೇವಲ ಕಚೇರಿ ನಿರ್ಮಾಣವಲ್ಲ, ಸಾರ್ವಜನಿಕರ ಹಿತಾಸಕ್ತಿಯ ಹತ್ಯೆ” ಎಂದು ಉಗ್ರವಾಗಿ ಖಂಡಿಸಿದರು.
ಹೋರಾಟಗಾರರ ಪ್ರಮುಖ ಪ್ರಶ್ನೆಗಳು:
ಸುರಕ್ಷತೆ ಎಲ್ಲಿದೆ: ನಿರ್ಜನ ಪ್ರದೇಶಕ್ಕೆ ವೃದ್ಧರು, ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಒಬ್ಬಂಟಿಯಾಗಿ ಹೋಗಲು ಹೇಗೆ ಸಾಧ್ಯ
ಯಾರ ಹಿತಕ್ಕಾಗಿ ಈ ಸ್ಥಳ: ಪಟ್ಟಣದ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗಗಳಿದ್ದರೂ ಪಟ್ಟಣದಿಂದ ದೂರದ ಜಮೀನನ್ನೇ ಆಯ್ದುಕೊಂಡಿದ್ದೇಕೆ
ಸರ್ಕಾರದ ಮೌನವೇಕೆ: ಜನರ ತೆರಿಗೆ ಹಣದಲ್ಲಿ ನಿರ್ಮಾಣವಾಗುವ ಭವನ ಜನರಿಗೇ ಬೇಡವಾದ ಮೇಲೆ ಸರ್ಕಾರಕ್ಕೆ ಹಠವೇಕೆ
ಎಚ್ಚರಿಕೆ:ಶಾಸಕರು ಮತ್ತು ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ಜನವಿರೋಧಿ ನಿರ್ಧಾರವನ್ನು ಕೈಬಿಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವು ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಮತ್ತು ಇದರ ಸಂಪೂರ್ಣ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ” ಎಂದು ಹೋರಾಟ ಸಮಿತಿಯ ಅಧ್ಯಕ್ಷರಾದ ದಶರತಸಿಂಗ್ ಮನಗೂಳಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಹೀರೂರ ಹಾಗೂ ಚೋಕ್ಕಾವಿ ಗ್ರಾಮದ ಹಿರಿಯರಾದ ಗುರಣ್ಣ ಚೌದರಿ, ಬಸವರಾಜ ಹೊಸಮನಿ, ಖಾಜಾಸಾಬ ಮಕಂದರ ಸಿದ್ದನಗೌಡ ಬಿರಾದಾರ, ಉಮೇಶ ಬಿರಾದಾರ ಸೋಮನಗೌಡ ಬೂದಿಹಾಳ, ರಾಮನಗೌಡ ಪಾಟೀಲ, ಭೀಮಣ್ಣ ಬಂಡಿವಡ್ಡರ, ಮಡಿವಾಳಪ್ಪ ಲಾಳಸಂಗಿ ಶಾಂತಗೌಡ ಜೈನಾಪುರ, ಶಾಂತಪ್ಪ ಸಜ್ಜನ, ರೇವಣಸಿದ್ದ ಇಂಗಳೇಶ್ವರ, ಗೌಡಪ್ಪ ವಂದಾಲ, ಸಂಗಣ್ಣ ತಳವಾರ, ಗುರುಣ್ಣ ತಮ್ಮದಡ್ಡಿ, ಅನೇಕರು ಹಾಜರಿದ್ದರು.
ಹೋರಾಟ ಸಮಿತಿಯ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ, ಆರ್ ಎಸ್ ಪಾಟೀಲ (ಕೂಚಬಾಳ) ಮುತ್ತಪ್ಪ ಚಮಲಾಪುರ, , ಕಾಶೀನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ದತ್ತು ಹೆಬಸೂರ, ಪರಶುರಾಮ ತಂಗಡಗಿ, ನಾಗೇಶ ಕಟ್ಟಿಮನಿ, ದೇವೇಂದ್ರ ಹಾದಿಮನಿ, ವಿಜಯಸಿಂಗ್ ಹಜೇರಿ, ಮಹೇಶ ಛಲವಾದಿ, ಪ್ರಕಾಶ್ ಹಜೇರಿ ಮುದಕಪ್ಪ ಬಡಿಗೇರ, ಸಿರಸಕುಮಾರ ಹಜೇರಿ, ಮಲ್ಲು ಮೇಟಿ, ಸದ್ದಾಂ ಹುಸೇನ್ ಬೀಳಗಿ, ಸೇರಿದಂತೆ ಅನೇಕರು ಮತ್ತು ಪಟ್ಟಣದ ಗಣ್ಯರು ಭಾಗವಹಿಸಿದ್ದರು.
