ಕುತೂಹಲ ಕೆರಳಿಸಿದ ಪಿಡಿಒ ಆತ್ಮಹತ್ಯೆ

ವಿಜಯ ಸಿಂಧೂರ ರೋಣ

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಸಮಸ್ಯೆಗಳು ಪರಿಹಾರ ಮಾಡಬೇಕಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣನಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತಾಲ್ಲೂಕಿನ ಅಸೂಟಿ ಹಾಗೂ ಕೊತಬಾಳ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾಗಿ (ಪಿಡಿಒ) ಕರ್ತವ್ಯ ನಿರ್ವಹಿಸುತ್ತಿದ್ದ ಮಕ್ತುಂಹುಸೇನ ಕರಡಿಗುಡ್ಡ (46) ಅವರು ಕೆಲಸದ ಒತ್ತಡ ಹಾಗೂ ಲೋಕಾಯುಕ್ತ ತನಿಖೆಗೆ ಬೇಸತ್ತು ಸಾವಿಗೆ ಶರಣಾದ ವ್ಯಕ್ತಿ ಈ ಘಟನೆ ತಾಲೂಕಿನ ಪಿಡಿಒಗಳ ವಲಯದಲ್ಲಿ ತಿವ್ಯ ಆತಂಕ ಮೂಡಿಸಿದೆ.

oppo_2

ಮೂಲತಃ ಧಾರವಾಡ ಜಿಲ್ಲೆಯವರಾದ ಇವರು, ಕಳೆದ ಎರಡು ತಿಂಗಳ ಹಿಂದೆ ಅಷ್ಟೇ ಕೊತಬಾಳ ಪಂಚಾಯಿತಿಯ ಪಿಡಿಒ ಆಗಿ ಅಧಿಕಾರ ವಹಿಸಿಕೊಂಡಿದ್ದರು ಪಿಡಿಒಗಳ ಕೊರತೆಯಿಂದ ತಾಲೂಕಿನ ಅಸೂಟಿಯ ಗ್ರಾಮ ಪಂಚಾಯಿತಿಯ ಜವಾಬ್ದಾರಿಯನ್ನು ವಹಿಸಿಲಾಗಿತ್ತು ಎರಡು ಗ್ರಾಮ ಪಂಚಾಯಿತಿಗಳ ಕೆಲಸ ಒತ್ತಡ ಹಾಗೂ ಈ ಹಿಂದೆ ಧಾರವಾಡ ಜಿಲ್ಲೆಯ ಗ್ರಾಮ ಪಂಚಾಯಿತಿ ಒಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಲೋಕಾಯುಕ್ತ ಪ್ರಕರಣದ ದಾಖಲು ಆಗಿದ್ದರ ಬಗ್ಗೆ ತೀವ್ರವಾಗಿ ಮನಸ್ಸಿಗೆ ಹಚ್ಚಿಕೊಂಡು ಅದೇ ಚಿಂತೆಯಲ್ಲಿ ಕೊರಗುತ್ತೀದರು ನಾನು ಸಾಕಷ್ಟು ಬಾರಿ ಸಣ್ಣ ಸಣ್ಣ ಮಕ್ಕಳ ಇದ್ದಾರೆ ನಿಮಗೆ ಕುಟುಂಬದ ಜವಾಬ್ದಾರಿ ಇದೆ ನೀವು ಯಾವುದನ್ನು ಚಿಂತೆ ನೌಕರಿ ಇಲ್ಲದಿದ್ದರೂ ದುಡಿದು ಜೀವನ ಸಾಗಿಸೋಣ ಎಂದು ನನ್ನ ಪತಿಗೆ ಧೈರ್ಯ ತುಂಬುತ್ತಿದೆ ಬೆಂಗಳೂರುನಲ್ಲಿ ಕಛೇಯ ಕೆಲಸವಿದೆ ನಾನು ಬೆಂಗಳೂರಿಗೆ ಹೊಗುತ್ತೆನೆ ನೀವು ಇಲ್ಲಿ ಇರುವುದು ಬೇಡ ಊರಿಗೆ ಹೋಗಿ ಎಂದು ನಮ್ಮನ್ನು ಕಳಿಸಿ ಈ ರೀತಿ ದುರ್ಘಟನೆ ನಡೆದಿರುವುದು ನಮಗೆ ತಿವ್ರ ಆಘಾತ ಉಂಟುಮಾಡಿದೆ ಎಂದು ಮೃತನ ಪತ್ನಿ ಆಸ್ಮಾಭಾನು ಕರಡಿಗುಡ್ಡ ವಿಜಯ ಸಿಂಧೂರ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದರು.

oppo_2

ದೂರವಾಣಿ ಕೆರೆಗೆ ಉತ್ತರಿಸಿಲ್ಲ

ಕಳೆದ ಎರಡು ದಿನಗಳಿಂದ ಕರಡಿಗುಡ್ಡ ಅವರು ಪತ್ನಿಯ ಯಾವುದೇ ಕರೆಗೆ ಸ್ಪಂದಿಸಿರಲಿಲ್ಲ. ಇದರಿಂದ ಆತಂಕಗೊಂಡ ಪತ್ನಿ, ಪತಿ ವಾಸವಿದ್ದ ಬಾಡಿಗೆ ಮನೆಯ ಮಾಲೀಕರಿಗೆ ಕರೆ ಮಾಡಿ ವಿಚಾರಿಸುವಂತೆ ವಿನಂತಿಸಿದ್ದರು. ಮಾಲೀಕರು ಮನೆಗೆ ಹೋಗಿ ಪರಿಶೀಲಿಸಿದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ.

ಈ ಕುರಿತು ತಾ ಪಂ, ಇಓ ಚಂದ್ರಶೇಖರ ಕಂದಕೂರ ಮಾತನಾಡಿ, ಹಿಂದಿನ ಲೋಕಾಯುಕ್ತ ಪ್ರಕರಣದಿಂದಾಗಿ ಎಂಟು ತಿಂಗಳ ವೇತನ ಬಾಕಿ ಇತ್ತು ನಮ್ಮ ತಾಲೂಕಿನ ಗ್ರಾಮ ಪಂಚಾಯಿತಿಗೆ ಕರ್ತವ್ಯಕ್ಕೆ ಹಾಜರಾದ ನಾಲ್ಕು ದಿನಗಳಲ್ಲಿ ಅವರ ವೇತನವನ್ನು ಬಿಡುಗಡೆ ಮಾಡಲಾಗಿದೆ, ಇಲಾಖೆಯ ಎಲ್ಲಾ ಸೌಲಭ್ಯಗಳನ್ನು ಅವರು ಕುಟುಂಬದವರಿಗೆ ಒದಗಿಸಲಾಗುವುದು ಎಂದು ತಿಳಿಸಿದರು.

oppo_2048

ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್ಐ ಪ್ರಕಾಶ್ ಬಣಕಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕು ಗೊಳ್ಳಿಸಿದ್ದಾರೆ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!