ರೋಣ:ಪಟ್ಟಣದ ಸಮೀಪದ ಬಸಲಾಪುರ ರಸ್ತೆಯ ಬಳಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ರೋಣದಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ವಾಹನ ಸಂಖ್ಯೆ KA 26 M 7439 ಹಾಗೂ ದ್ವಿಚಕ್ರ ವಾಹನ ಸಂಖ್ಯೆ KA 26 Y 2527 ಮುಖಾಮುಖಿ ಡಿಕ್ಕಿ ನಡೆದಿದ್ದು ಎರಡು ವಾಹನಗಳು ನುಜ್ಜು-ಗುಜ್ಜಾಗಿವೆ ನಡು ರಸ್ತೆಯಲ್ಲಿ ಬಿದ್ದಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಗಾಯಗೊಂಡ ಬೈಕ್ ಸವಾರನನ್ನು ತಾಲೂಕಿನ ಚಿಕ್ಕಮಣ್ಣೂರ ಗ್ರಾಮದ ನಿವಾಸಿ ಶರಣಪ್ಪ ಭೀಮಪ್ಪ ಮಣ್ಣೂರ ಗಾಯಗೊಂಡ ಯುವಕ.ಅಪಘಾತದ ಪರಿಣಾಮ ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡಿದ್ದು ರೋಣ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಸುದ್ದಿ ತಿಳಿದ ರೋಣ ಠಾಣೆ ಆರಕ್ಷಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಪಘಾತಕ್ಕೆ ಒಳಗಾದ ಎರಡು ವಾಹನಗಳನ್ನು ಠಾಣೆಗೆ ಸಾಗಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿದರು.ಈ ಕುರಿತು ರೋಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗುವುದು ಎಂದು ಪಿಎಸ್ಐ ಪ್ರಕಾಶ್ ಬಣಕಾರ ಹೇಳಿದರು.
