ಜೀವನ ಆಯ್ದುಕೊಳ್ಳಿ, ತಂಬಾಕನಲ್ಲ : ನ್ಯಾ. ಮಹದೇವಪ್ಪ ಹೆಚ್

ವಿಜಯ ಸಿಂಧೂರ, ರೋಣ

ತಂಬಾಕು ಸಾಮಾನ್ಯವಾಗಿ ಪ್ರತಿ ಮನುಷ್ಯನ ದೈನಂದಿನ ಜೀವನದಲ್ಲೂ ಅವಿಭಾಜ್ಯ ಅಂಗವಾಗಿ ಸೇರಿಕೊಂಡು, ತನ್ನ ಕರಾಳ ಬಾಹುಗಳಿಂದ ಮನುಷ್ಯನಿಗೆ ಮಾರಕವಾಗಿ ಪರಿಣಮಿಸಿ, ಮನುಷ್ಯನ ಆರೋಗ್ಯದ ಮೇಲೆ ಮಾರಕ ಪರಿಣಾಮವನ್ನು ಬೀರುತ್ತಿದೆ ಹಾಗಾಗಿ ಪ್ರತಿಯೊಬ್ಬರೂ ಜೀವನವನ್ನು ಆಯ್ದುಕೊಳ್ಳಿ ತಂಬಾಕನಲ್ಲ ಎಂದು ಹಿರಿಯ ದಿವಾನಿ ನ್ಯಾಯಾಧೀಶರಾದ ಹೆಚ್ ಮಹಾದೇವಪ್ಪ ಹೇಳಿದರು.
ಅವರು ರೋಣ ಪಟ್ಟಣದ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ವಿಭಾಗ, ಗದಗ ತಾಲೂಕ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಆರಕ್ಷಕ ಇಲಾಖೆ, ಪೌರಾಡಳಿತ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ಯಾನ್ಸರ್, ಶರಣರ ಶಿಕ್ಷಣ ಸಮಿತಿಯ ಪ್ಯಾರಾಮೆಡಿಕಲ್ ಕಾಲೇಜ್ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ನರ್ಸಿಂಗ್ ಕಾಲೇಜ್ ಮತ್ತು ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ರೋಣ ಇವರ ಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ತಾಲೂಕ ಮಟ್ಟದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದರು,

ತಂಬಾಕು ಮನುಷ್ಯನ ಜೀವನದಲ್ಲಿ ಹಾಸು ಹೊಕ್ಕಾಗಿದೆ ಪ್ರತಿ ವರ್ಷ 10 ದಶಲಕ್ಷ ಸಾವುಗಳು ತಂಬಾಕಿನ ಕೇಡಿನಿಂದ ಪ್ಯಾಸೀವ್ ಸ್ಮೋಕ್ ನಿಂದ 15 ಲಕ್ಷ ಸಾವುಗಳು ಸಂಭವಿಸುತ್ತಿದ್ದು ಇಂತಹ ಮರಣಾಂತಿಕ ಮಾದಕ ವಸ್ತುವನಿಂದ ಸಾರ್ವಜನಿಕರು ದೂರವಿರಬೇಕೆಂದು ಅವರು ಹೇಳಿದರು


ಕಾರ್ಯಕ್ರಮದ ಅತಿಥಿ ಅಧಿಕ ದಿವಾಣಿ ನ್ಯಾಯಾಧೀಶರಾದ ವಿಜಯಕುಮಾರ್ ಎನ್ ಮಾತನಾಡಿ, ಮನುಷ್ಯ ಹಸುವಿನಿಂದ ಕಂಗೆಟ್ಟಾಗ ಆಹಾರಕ್ಕಾಗಿ ಹಾತೊರೆಯುತ್ತಾನೆ ಅವನಲ್ಲಿ ಸಂಪುತ್ತು ಕ್ರೋಡಿಕರಣವಾದ ಮೇಲೆ ಅನೇಕ ದುಶ್ಚಟಗಳಿಗೆ ಬಲಿಯಾಗಿ ತನ್ನ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾನೆ ಆದ್ದರಿಂದ ಯುವಜನತೆ ಮತ್ತು ಮಾದಕ ವಸ್ತುವಿನ ವ್ಯಸನಿಗಳಾದವರು ಇಂತಹ ಕ್ಯಾನ್ಸರ್ ಕಾರಕ ಅತ್ಯಂತ ವಿಷಕಾರಿ ಪದಾರ್ಥವಾದ ತಂಬಾಕಿನಿಂದ ದೂರವಿರಬೇಕು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಮುಶಿಗೇರಿಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಚಿದಾನಂದ ಮುಂಡಾಸದ ಮಾತನಾಡಿ, ತಂಬಾಕಿನಲ್ಲಿ ಸುಮಾರು ಏಳು ಸಾವಿರ ವಿಷರಸಾಯನಿಕಗಳಿದ್ದು 70 ರಾಸಾಯನಿಕಗಳು ಕ್ಯಾನ್ಸರ್ ಕಾರಕಗಳಾಗಿವೆ ಉದಾಹರಣೆಗೆ ನಿಕೋಟಿನ್, ನೈಟ್ರೋಸೋಮೈನ ಗಳು, ಬೆಂಜಿನ್,ಪಾಲಿ ಸೈಕ್ಲಿಕ್ ಎರುನೆಟಿಕ್ ಹೈಡ್ರೋಕಾರ್ಬನ್, ಭಾರಲೋಹಗಳು ಇದರಲ್ಲಿ ತುಂಬಾ ವ್ಯಾಪಕವಾಗಿದ್ದಾವೆ ಇಂತಹ ಮಾದಕ ವಸ್ತು ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್, ಹೃದಯಘಾತ, ಪಾರ್ಶ್ವ ವಾಯು, ಬಾಯಿ ಕ್ಯಾನ್ಸರ್,ದೀರ್ಘಕಾಲದ ಉಸಿರಾಟದ ಕಾಯಿಲೆಗಳು ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳಿಂದ ಉಂಟಾಗುತ್ತಿದ್ದು ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಂಡು ಸಾವಿನ ದವಡೆಗೆ ಸಿಲುಕದೆ ತಡೆಗಟ್ಟಬಹುದಾದ ಸಾವಿನ ದವಡೆಯಿಂದ ಪಾರಾಗಬೇಕೆಂದು ಅವರು ಹೇಳಿದರು

ಕಾರ್ಯಕ್ರಮದ ವೇದಿಕೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಈಶ್ವರ ಕುರಿ, ಆರಕ್ಷಕ ಇಲಾಖೆಯ ರೋಣದ ಪಿಎಸ್ಐ ವಿ ಎಸ್ ಸವಡಿ, ಪುರಸಭೆ ರೋಣದ ನಬಿಸಾಬ್ ಕಂದಗಲ್ ಶರಣರ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ಪ್ರಮೋದ್ ಚರಂತಿಮಠ ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ವಿ ಎಸ್ ಮಠದ ಕಾರ್ಯದರ್ಶಿಗಳಾದ ಎಮ್ ಹೆಚ್ ಮುಲ್ಲಾ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಕೆ ಎ ಹಾದಿಮನಿ ಆರ್ ಬಿ ಎಸ್ ಕೆ ವೈದ್ಯಾಧಿಕಾರಿಗಳಾದ ಡಾ. ರಾಘು ಹೊಸೂರ್ ಡಾ. ಸುನಿಲ್ ಸಾರಂಗಮಠ ಡಾ. ದಾನಮ್ಮ ಹೆಚ್ ಡಾ. ನಾಗರಾಜ್ ಸತ್ತಿಗೇರಿ ಪ್ರಭಾರಿ ತಾಲೂಕ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಿ ಆರ್ ಪಾಟೀಲ್ ಹಾಜರಿದ್ದರು

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!